ಕ್ರಿಕೆಟ್
- Poojith Prakash
- Jan 26, 2024
- 1 min read
Updated: Jan 27, 2024
ಬರೆಯುವರು ಬರೆಯುವುದು ನಿಲ್ಲಿಸಿದರು,
ಓದುತ್ತಿರುವರು ಒದುವಾದು ನಿಲ್ಲಿಸಿದರು.
ಗುರುಗಳು ಪಾಠಮಾಡುವುದನ್ನು ನಿಲ್ಲಿಸಿದರು,
ರಾಜಕಾರಣಿಗಳು ಜಗಳವಾಡುವುದನ್ನು ನಿಲ್ಲಿಸಿದರು.
ಎಲ್ಲವನ್ನು ನಿಲ್ಲಿಸಿದರು ಕ್ರಿಕೆಟ್ ನೋಡಲು ಕುಳಿತರು,
ಏಲ್ಲ ಅಂಗಡಿಗಳ ಮುಂದೆ ಗುಂಪು ಸೇರುತ್ತ.
ಕಾಲೇಜುಗಳಲ್ಲಿ ಗುಂಪುಗಳಾಗಿ ನಿಲ್ಲಿತ್ತ,
ಆಫೀಸಿನಲ್ಲಿ ಲೈವ್ ಮಾಚ್ ನೋಡುತ್ತ.
ಆಷ್ಟ್ರೇಲಿಯಾದ ಚಂದ ಆಟವನ್ನು ಬೈಯುತ್,
ತಲೆ ತಲೆ ಚಚ್ಚಿಕೊಂಡರು.
ಎಲ್ಲರ ಬಾಯಲ್ಲೂ ವಿಕೆಟ್ ಗಳ ಬಗ್ಗೆಯೇ ಮಾತು,
ಸ್ಕೋರ್ ಎಷ್ಟು ಎನ್ನುವುದೇ ಬಹು ಮಾತು.
ಮಳೆ ಬಂದರೆ ಭಾರತ ಗೆಲ್ಲುತ್ತೆ ಎಂದ ಒಬ್ಬ,
ಗೆದ್ದರೆ ಸಾಕು ಎಂದ ಇನ್ನೊಬ್ಬ.
ಏಲ್ಲ ಮುಗಿಯುವುದು ಮ್ಯಾಚ್ ಮುಗಿದ ಮೇಲೆ,
ನಾವೊ ಅವರೋ ತಿಳಿದಿದು ಈ ದಿನ ಮುಗಿದ ಮೇಲೆ.
ಆದರೂ ನನಗೊಂದು ಆಸೆ, ನಾವೇ ಗೆಲ್ಲಬೇಕು.
-ಪೂಜಿತ್ ಪ್ರಕಾಶ್
Comments